Saturday 26 November 2016

ಹೊಸ ವರ್ಷ, ೨೦೧೭ರ ವರ್ಷ ಭವಿಷ್ಯ ಕಟಕ ರಾಶಿ ೨೦೧೭:- KATAKA RASI-೨೦೧೭

ಹೊಸ ವರ್ಷ, ೨೦೧೭ರ ವರ್ಷ ಭವಿಷ್ಯ
ಕಟಕ ರಾಶಿ ೨೦೧೭:-
KATAKA RASI-೨೦೧೭


ಈ ಕೆಳಗಿನವು ನಿಮ್ಮ ಹಿಂದಿನ ವರ್ಷದ ಪುರಾಣ:-

ನಿಮ್ಮದು ಚಾನ್ಸೋ ಚಾನ್ಸು. ಇನ್ನೂ ದುಡ್ಡು ಗೋರುವುದು ಮುಗಿಯದ ಕತೆ. ಅದು ಇನ್ನೂ ಆಗಸ್ಟ ತಿಂಗಳ ೧೧ ನೇ ತಾರೀಕಿನವರೆಗೆ ನಿಮಗುಂಟು. ಅಲ್ಲಿಯವರೆಗೆ ನೀವು ಎಸ್ಟು ಗೋರುತ್ತೀರೋ ಏನೋ?. ಗೋರಿ ಬಿಡಿ. ಹಾಗಾದರೆ ಆಗಸ್ಟ್ ೧೨ ಮೇಲೆ ಏನಾಗುತ್ತೆ ಅಂತೀರಾ? ಗಾಬರಿ ಪಡಬೇಡೀ. ಗುರು ಗ್ರಹ ಇದುವರೆಗೆ ನಿಮ್ಮ ಮನೆಯಲ್ಲಿಯ ಪಿ..ಪಿ ಕೆಳಗೆ ಹಣದ ಕಟ್ಟನ್ನ ಇಡುತ್ತಾ ಬರಲು ಸಹಾಯವನ್ನ ಮಾಡುತ್ತಿದ್ದು, ಇನ್ನು ಮುಂದೆ ನಿಮಗೆ ಸೌಲಭ್ಯ ದೊರಕುವುದಿಲ್ಲ ಅಂತ ಹೇಳಿದೆ ಅಸ್ಟೆ. ಆದರೆ ಗುರು ಗ್ರಹವು ಇದ್ದ ಮನೆಯನ್ನ ಹಾಳು ಮಾಡುತ್ತಿದ್ದು, ನೋಡುವ ಮನೆಯನ್ನ ಒಳ್ಳೆಯದನ್ನ ಮಾಡುತ್ತಾನೆ ಎಂದು ನಿಮಗೂ ತಿಳಿದಿರುವ ವಿಷಯ. ಗುರು ಗ್ರಹವು ನಿಮ್ಮ ಕಳತ್ರ ಸ್ತಾನದ ಮೇಲೆ ಕಣ್ಣನ್ನ ಹಾಕುವುದರಿಂದ ನಿಮ್ಮ ಹಾಗೂ ನಿಮ್ಮ ಪತಿ /ಪತ್ನಿಯ ಮೇಲೆ ಇನ್ನಸ್ಟು ಪ್ರೀತಿ, ಪ್ರೇಮ ಹುಟ್ಟುತ್ತದೆನಿಮ್ಮ ಭಾಗ್ಯದಲ್ಲಿ ಏರುವಿಕೆಯನ್ನ ಕೊಡುವನು. ಇನ್ನು ನಿಮ್ಮ ವೃತ್ತಿಯಲ್ಲಿ ಏರುವಿಕೆಯನ್ನ ಕೊಡುವನು. ಆವಾಗ ನಿಮಗೆ ಆಟೋಮೇಟಿಕ್ ಆಗಿ ಹಣದ ಚೀಲ, ಇಲ್ಲವೇ ಮನೆಗೆ ಬೇಕಾಗುವ ಸಾಮಾನುಗಳ ಚೀಲವೇ ಹರಿದು ಬರುವುದರಲ್ಲಿ ಸಂದೇಹವೇ ಇಲ್ಲ.

ಈಗ ನಿಮಗೆ ೨೦೧೭ ರ ಭವಿಷ್ಯವನ್ನ ಹೇಳಲಿಕ್ಕಿದ್ದೇನೆ.

ಈ ಮೇಲೆ ಹೇಳಿದಂತಹ, ೨೦೧೬ ರ ಭವಿಷ್ಯ, ನಿಮಗೆ ಸರಿ ಬಂದಿದ್ದಲ್ಲಿ, ವರ್ಷ ೨೦೧೭ರ ಭವಿಷ್ಯವೂ ಸರಿ ಬಂದೇ ಬರುತ್ತದೆ. ಇದಕ್ಕೆ ಕಾರಣಾ, ನಿಮ್ಮ ಜಾತಕದಲ್ಲಿರುವ ಗ್ರಹಗತಿಯೇ ವಿನಹ, ನನ್ನ ನುಡಿಯಲ್ಲ. ನನ್ನ ಅನುಭವ ಮತ್ತು ಜ್ನಾನವಷ್ಟೆ. ನಮ್ಮ ಗುರುಗಳು ಹೇಳಿದಂತೆ, ಅವರು ತುಳಿದ ಮಾರ್ಗವನ್ನೇ ನಾನು ತುಳಿಯುತ್ತಿದ್ದೇನೆ. ಮತ್ತೆ ನಮ್ಮ ಹಿರಿಯವರ ಆಶೀರ್ವಾದ.

When you found that, forecast for the year 2016 was correct, then, year 2017 forecast will also come true at least to the extent of 75%. It is because of your planetary positions in the chart and not due to my forecast. What I predict is based on planetary position and as I under stood from reading of books as well as what I learnt from my Guru! I am stepping in the shoes of my preacher.

ಈ ವರ್ಷ ಸಪ್ಟೆಂಬರ್ ೧೧ ರ ವರೆಗೆ ಗುರುವು ಕನ್ಯಾದಲ್ಲೇ ಇದ್ದು, ಸಪ್ಟೆಂಬರ್ ೧೨ ರ ಮೇಲೆ ತುಲಾಗೆ ಹೋಗುತ್ತಾನೆ. ಅಂದರೆ ಏನು? ನೀವು ಹೊಸ ಮನೆಯನ್ನ ಕಳೆದ ವರ್ಷ ಕಟ್ಟಿದಲ್ಲಿ, ಆ ಮನೆಯಲ್ಲಿಯೇ ಕಾಲವನ್ನ ಕಳೆಯುವಿರಿ ಎಂದಾಯಿತು. ಗುರು ಗ್ರಹವು ನಿಮ್ಮ ರಾಶಿಯಿಂದ ೪ ನೇ ಮನೆಗೆ ಕಾಲಿಡುವನು. ಅರ್ಥಾತ್ ಮನೆ, ಮಠ, ವಾಹನ, ತಾಯಿ, ಪಬ್ಲಿಕ್ ಎಲ್ಲರೂ ನಿಮ್ಮ ಹತ್ತಿರವೇ ಸುಳಿಯುವುದು ಅಥವಾ ಸುಳಿಯುವರು. ಎಲ್ಲಿ ಜೇನೋ ಅಲ್ಲಿ ಜೇನಿನ ಹುಳವಿದ್ದೇ ಇರುತ್ತೆ. ನಮ್ಮಂತಹ ಕೆಲವರು ಈ ನಿಮ್ಮ ಧನ ಸಂಪತ್ತಿಗೆ ಬೆಲೆಯನ್ನ ಕೊಡುವುದಿಲ್ಲವಷ್ಟೆ. ಕಾರಣ ಈಗ ನಮ್ಮ ಪ್ರಧಾನ ಮಂತ್ರಿಯವರು ರೂಪಾಯಿ ೫೦೦ ಮತ್ತು ೧೦೦೦ ವನ್ನ ೮/೧೧/೨೦೧೬ ರ ರಾತ್ರೋ ರಾತ್ರಿ ನಿಷೇಧಿಸಿದರು. ಆಗ ನಿಮ್ಮ ಕೂಡಿಟ್ಟ, ಮನೆಯ ಪೀಓಪಿಯ ಕೆಳಗಡೆ ಕಟ್ಟು ಕಟ್ಟೂ ಇಟ್ಟಂತಹ ಹಣವು ನಿಮ್ಮ ಪಾಲಾಯಿತೇ? ಹೇಳಿ. ಅಂದರೆ ಈ ಧನ ಸಂಪತ್ತೆಲ್ಲಾ ಅಷ್ಟೆಯೇ. ಆದರೆ ನಿಮ್ಮ ಗುಣಗಳು ಒಳ್ಳೆಯದಿದ್ದಲ್ಲಿ, ನಿಮ್ಮನ್ನ ಎತ್ತಿ ತೂಗುತ್ತಾರೆ. ಅದೇ ನೀವು ಜನ ಸಾಮಾನ್ಯರಿಗಾಗಿ ಕೆಲಸವನ್ನ ಮಾಡಿದಲ್ಲಿ ನಿಮ್ಮನ್ನ ಹಾಡಿ ಹೊಗಳುತ್ತಾರೆ. 

Uptill Septembers 11, 2017, Jupiter will be in Virgo and from September 12th, 2017 onwards he will be stepping into Libra. Suppose, if you have started construction in last year, then this year you will do Grahapravesham of the house physically as Libra becomes 4th H from your Karka Rashi. May be one month hear and there. Since it is Sukh (Happiness) Sthan, Vahan (Vehicle) Sthan, Matru (Mother) Sthan , house for highschool education, and for public also, all will be coming near to you. Where, the honey is, there the honeybees. Likewise, your people and relatives also except a few people like me type, will  give value to your money power (Except some people of me type, who will not give value to the Money). Now just see what our PM shri Narendra Modiji did is, by banning Rs.500 and Rs.1000 notes, he spoilt the sleep of many corrupt people in a single night on 8th November, 2016! What happened to the notes piled up or accumulated in your old trunks, below the carpet, underneath the sofa, behind POP of your house interiors etc.? Entire wealth of yours becomes valueless in a single night. In that situation only your good deeds and public relationship or contact may come into work. Then the same people will appreciate you.


ಎಲ್ಲರೂ, ಬಡವರಾಗಲೀ, ಶ್ರೀಮಂತರಾಗಲೀ ೬೫ ನಿಮಗೆ ಡಾಟ್ತಾ, ಅವರಿಗೆ ಕಾಣುವುದು ಒಂದೇ ದಾರಿ. ಅದು ಏನೆಂದರೆ ಮೋಕ್ಷವನ್ನ ಹೇಗೆ ಗೈಯಲೀ ಅಂತವಷ್ಟೇ ವಿನಹ, ಈ ಹಣ, ಮುಲ್ಟೀ ಪ್ರೋಪರ್ಟೀಸ್ ಎಲ್ಲಾ ನಮ್ಮಿಂದ ಭೂಮಿಯ ಮೇಲೆ ಉಳಿದೇ ಹೋಗುವುದು. ಇದನ್ನ ಯಾತಕ್ಕೆ ನಾನು ಹೇಳುತ್ತೇನೆಂದರೆ, ಈ ಕಟಕ ರಾಶಿಯವರಿಗೆ ಮಾತ್ರ ಇಂತಹ ಉಪದೇಶ ಬ್ಯಾಡವೇ ಬ್ಯಾಡ. ನಾವು ರೂಪಾಯಿ ೫೦೦.೦೦ ಇದುವರೆಗೆ ಚಾರ್ಜನ್ನ ಮಾಡುತ್ತಿದ್ದೆ. ಈಗ ರೂಪಾಯಿ ೫೦೦೦.೦೦ ವನ್ನ ಹೇಗೆ ಚಾರ್ಜನ್ನ ಮಾಡಲೀ? ಎನ್ನುವ ಒಂದೇ ಒಂದು ಗುರಿಯೇ ವಿನಹ, ಬೇರೊಂದು ಮಾತೇ ಅವರ ಹತ್ತಿರವಿಲ್ಲ. ಹಣ ಹಣ, ನನ್ನ ಮಗ, ನನ್ನ ಮಗಳೂ ಅಂತ ನೀವೇ ನೋಡಿ ಅವುಗಳ ಸುತ್ತಾ, ಮುತ್ತಾ ಕುಣಿಯುತ್ತಲೇ ಇರುತ್ತಾರೆ. ನನಗೆ ಮಾತ್ರ ಅವರೆನ್ನೆಲ್ಲಾ ಕಂಡಲ್ಲಿ ಅಯ್ಯೋ ಪಾಪಾ ಅನ್ನಿಸುತ್ತೆ. ಅಂತಹವರಿಗೆ ಈ ಜ್ಯೋತಿಷ್ಯದ ಮುಖಾಂತರ ಸ್ವಲ್ಪ ಮಟ್ಟಿಗೆ ಸರಿಯಾದ ದಾರಿಯನ್ನ ಕಾಣಲೀ ಅಂತ ಉಪದೇಷವನ್ನೂ ಬ್ಯಾಡದೇ ಇದ್ದರೂ ಕೊಡುತ್ತಿರುತ್ತೇನೆ ಅನ್ನಿ. ಅಷ್ಟೆ. ಮತ್ತೆ ನಾನೆಲ್ಲಿಯಾದರೂ ಅವರುಗಳ ಗ್ರಹ ಗತಿಯನ್ನು ಬದಲಾಯಿಸಲು ಸಾಧ್ಯವೋ? ಮತ್ತೆ ನೀವು ಸದಾ ಈ ನಮ್ಮ ಈಷ, ರಾಮೇಷ ನಮಗೇನು ಕೊಡ್ತಾನಪ್ಪಾ ಎಂದು ನಿಮ್ಮ ಕೈಯನ್ನೇ ನೋಡುತ್ತಿರುವ ಸಂದರ್ಭ ಬರುತ್ತೆ ನೋಡಿ.

After 65, whether poor or rich, they should be having only one goal, how to achieve attenuation? All these materialistic wealth will be remained on earth only as it has come from the earth. Only your body will be burnt and after burnt of your body, ashes also will be going into the earth once again. If you realize at least this much philosophy, then it s more than sufficient. But Kataka rashi people will not like these advise. Their eyes  are only on money, money and money only. They are like Arjun of Mahabharath, who saw only the eye of fish tied on top. Normally these people are for their family only and not more than that. However, it is not in my hands to change their stipulated fate!


ಅದೇ ಗುರುಗ್ರಹದ ಪಂಚಮ ದೃಷ್ಟಿಯು ಕುಂಭ ರಾಶಿಯ ಮೇಲೆ ಬೀಳುವುದರಿಂದ, ಅದು ನಿಮ್ಮೆ ರಾಶಿಯಿಂದ ಅಷ್ಟಮವಾದುದರಿಂದ ನಿಮಗೆ ಫ಼ಿಜ಼ೂಲ್ ಖರ್ಚುಗಳು ಆಸ್ಪತ್ರೆಗಾಗಿ, ನಿಮ್ಮ ಆರೋಗ್ಯಕ್ಕಾಗಿ ಆಗಲು ಸಾಧ್ಯವುಂಟು. ನಿಮಗೆ ಇಲ್ಲದ ಅಡಚಣೆಗಳು ಬಂದಾವು. ಸರ್ಕಾರದಿಂದಲೂ ನೋಟೀಸುಗಳು ನಿಮ್ಮ ಹಸ್ತವನ್ನ ಸೇರಿಯಾವು ಎಚ್ಚರ.

If you look at the Guru’s 5th aspect, it will be on your 8th H, viz on Aquarious. So, unnecessary expenditure for your health. You may be admitted to the hospital also! You may be facing unnecessary hurdles.

ಗುರುವಿನ ೭ನೇ ದೃಷ್ಟಿಯು ಮೇಷ ರಾಶಿಯ ಮೇಲೆ ಬೀಳುವುದರಿಂದ ಅದು ನಿಮ್ಮ ರಾಶಿಯಿಂದ ದಶಮ ಸ್ಥಾನವಾದುದರಿಂದ, ನಿಮ್ಮ ವೃತ್ತಿಯಲ್ಲಿ ಇನ್ನಷ್ಟು ಕ್ಲೈಂಟ್ಸ್ಗಳು ನಿಮ್ಮ ಪಟ್ಟಿಯಲ್ಲಿ ಹೆಚ್ಚಾದಾವು. ಈ ಕಾಳಧನವನ್ನ ಹೇಗೆ ನಾವು ವಾಪಾಸು ಸರಕಾರದಿಂದ, ಅಲ್ಲಾ ಡೆಪೋಸಿಟ್ ಮಾಡಿ ೨೦೦ ಶೇಕಡಾ ಪೆನಾಲ್ಟಿಯನ್ನು ಕೊಟ್ಟದ್ದನ್ನ ಹೇಗೆ ಮತ್ತೆ ವಾಪಾಸನ್ನ ಪಡೆಯುವುದು? ಅನ್ನುವವರೆಲ್ಲಾ ನಿಮ್ಮನ್ನ ಕೋಂಟೇಕ್ಟ್ ಮಾಡಬಹುದು. ಅದರಿಂದಾಗಿ ನಿಮ್ಮ ವೃತ್ತಿಯು ಬೆಳಗುತ್ತದೆ. ಅದೇನೋ? ನನಗೇ ಗೊತ್ತಿಲ್ಲದ ಹಾಗೆ ಕಟಕ ರಾಶಿಯ ಬಗ್ಗೆ ಬರೆಯುವಾಗ, ಯಾವಾಗಲೂ ನಿಮ್ಮನ್ನೇ ನಾನು ತಲೆಯಲ್ಲಿಟ್ಟು ಬರೆಯುತ್ತೇನೆ. ಆವಾಗ ಮಾತ್ರ ನನ್ನ ಭವಿಷ್ಯವೂ ಸರಿಯಾಗುತ್ತೇ ನೋಡಿ. ಅದಕ್ಕಾಗಿ ನಿಮಗೆ ನಾನು ಇಲ್ಲಿಯೇ ನಿಮಗೆ ಹೃತ್ಪೂರಕ ವಂದನೆಗಳನ್ನ ಸಲ್ಲಿಸುತ್ತೇನೆ.  ಅದೇ ನೀವೆಲ್ಲಿಯಾದರೂ ಬ್ಯಾಂಕಿನಲ್ಲಿಯೋ, ಲೈಫ಼್ ಇನ್ಸೂರೆನ್ಸ್ ಕೋರ್ಪರೇಷನ್ ನಲ್ಲಿಯೋ ಅಥವಾ ಸರಕಾರೀ  ಹುದ್ದೆಯಲ್ಲೋ ಅಥವಾ ಕಂಪೆನಿಯಲ್ಲಿಯೋ ಇದ್ದ ಪಕ್ಷದಲ್ಲಿ ನಿಮಗೆ ಪ್ರಮೋಷನ್ ಕಟ್ಟಿಟ್ಟ ಬುತ್ತಿ. ನಿಮ್ಮ ವೃತ್ತಿಯಲ್ಲಿ ನಿಮಗೆ ಮಾನ ಸನ್ಮಾನಗಳು ಹೊರೆ ಹೊರೆಯಾಗಿ ಬರುತ್ತವೆ.

Guru’s 7th aspect will be on Aries, which is your professional house and hence you will get new clients if you are in lawer or CA profession. Perhaps they may approach you for asking you, how to get back their balack money back without paying 200% penalty! Or one step ahead that, how to get back their 200% penalty which is already paid, back from the Government or from the IT authorities. ? So your professional fields will be flourished. I presume that, you must have born with silver spoon in the mouth. Almost all year will be good for your rashi only when I started writing this predictions since 2012 onwards!. Suppose if you are working in a Govt. Company, or Banking or LIC Corporation or in accompany, your promotions are 100 % guaranteed. You will get due respect from the employees. If you are in business, it will be flourished.

ಅದೇ ಗುರುವಿನ ೯ ನೇ ದೃಷ್ಟಿಯು ಮಿಥುನ ದ ಮೇಲೆ ಬೀಳುವುದರಿಂದ ಅದು ನಿಮ್ಮ ರಾಶಿಯಿಂದ ವ್ಯಯ ಸ್ಥಾನವಾದುದರಿಂದ, ನೀವು ಧಾರ್ಮಿಕ ಖರ್ಚುಗಳನ್ನ ಹೆಚ್ಚು ಹೆಚ್ಚು ಮಾಡುವಿರಿ. ದೇವಸ್ಥಾನ, ಕುಲದೇವಿಯ ದರ್ಷನ, ಕುಕ್ಕೆ, ಕೊಲ್ಲೂರು, ಧರ್ಮಸ್ಥಳ ಇತ್ಯಾದಿ ದೇವರ ದರ್ಷನವನ್ನೂ ಮಾಡುವಿರಿ. ನಿಮ್ಮ ಲವ್ ಏಂಡ್ ರೋಮೇನ್ಸ್ ಇನ್ನಷ್ಟು ಪ್ರೀತಿಯಾಗಿ ಹರಿದೀತು!

9th aspect of Jupiter will be falling on to Gemini which is your 12th House.So you may have to spend money for religious activities. You may visit your family god or goddess, you may visit Kollure, Kamalashile, Dharmasthal or Kateel or Banashankari etc. during this period. Your love and romance will be in full swing.

ಅದೇ ಶನೈಶ್ಚರನು ನಿಮ್ಮ ರಾಶಿಯಿಂದ  ಧನೂರ್ ರಾಶಿಗೆ ಹೋಗುವ ಕಾರಣ ಅದು ನಿಮಗೆ ೬ ನೇ ಮನೆಯಾದ ಕಾರಣ, ತೆಗೋ ಶನಿ ಮಹಾದೇವನ ಕೃಪೆ ನಿಮ್ಮ ಮೇಲೆ ಮಳೆ ಬಿದ್ದ ಹಾಗೆ ವಕ್ಕರಿಸಿ ಬಂದಿತು ನೋಡಿ. ಶನಿಯು ಗೋಚಾರದಲ್ಲಿ ೩,೬,೧೧ ನೇ ಮನೆಯಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ. ನಾನು ಈ ಮೊದಲೇ ಹೇಳಿದಂತೆ, ನೀವೆಲ್ಲಿಯಾದರೂ ಲಾಯರ್ ಆದ ಪಕ್ಷದಲ್ಲಿ, ನೀವು ಬೆಳ್ಳೀ ಚಮಚವನ್ನ ನಿಮ್ಮ ತಾಯಿಯ ಗರ್ಭದಿಂದ ಹುಟ್ಟುವಾಗ, ಬಾಯಿಗೆ ಹಾಕಿಕೊಂಡೇ ಹುಟ್ಟಿರುವಿರೀ ಅಂತ ನನ್ನ ಅನ್ನಿಸಿಕೆ. ಯಾಕೆಂದರೆ ನಿಮಗೆ ಶನಿ ಮಹಾರಾಜನು ಒಂದು ವೇಳೇ ಯೋಗಕಾರಕನಾಗಿದ್ದಲ್ಲಿ, ಅಥವಾ ನೀವು ಮಕರಲಗ್ನವಾಗಿದ್ದು, ಶನಿಯು ನಿಮ್ಮ ಮೂಲತ್ರಿಕೋಣ ರಾಶಿಯಾದ ಕುಂಭದಲ್ಲಿ ಇದ್ದಲ್ಲಿ, ಅಥವಾ ನೀವು ತುಲಾ ಲಗ್ನವಾಗಿದ್ದು, ಶನಿಯು ನಿಮ್ಮ ಲಗ್ನದಿಂದ ೬ ನೇ ಮನೆಯಾದ ಮೀನದಲ್ಲೇನಾದರೂ ಇದ್ದಲ್ಲಿ, ನಿಮಗೆ ಸುಗ್ಗಿಯೋ ಸುಗ್ಗಿ ವರ್ಷ ೨೦೧೭.


Since Saturn will be proceeding to your 6th H, Sagittarius, he will bless you with all sorts of comforts, big new vehicles, more clients for the business etc. Saturn in Gochara will do good when in 3,6 and 11 from your Rashi. If he starts giving, he will reap the benefits to the full extent.

 ನಾನು ಈ ಮೊದಲೇ ಹೇಳಿದಂತೆ, ನಿಮ್ಮ ಬಾಗಿಲಿನ ಮುಂದೆಯೂ ಗಿರಾಕಿಗಳು, ಏಟೀ. ಎಮ್ನಿಂದ ದುಡ್ಡನ್ನ ತೆಗೆದುಕೊಳ್ಳಲು ಕ್ಯೂ ನಿಂತಂತೆ, ಸಾಲಾಗಿ ನಿಲ್ಲುವ ವರ್ಷವುದು. ಇಷ್ಟೆಲ್ಲಾ ಹೊಗಳಿ ಬರೆಯುತ್ತಿದ್ದೇನಲ್ಲಾ, ಸ್ವಲ್ಪ ನಿಮ್ಮ ಕಮಾಯಿಯನ್ನೂ ನಮ್ಮತ್ತ ತಳ್ಳಲು ಮರೆಯದಿರಿ. ಮರೆತೆಯಾದರೆ , ಐಯ್ಯೋ ಮರೆತಂತೆ ನನ್ನಾ ಅಂತ ಈ ಮೂಲಕ ನಿಮಗೆ ಸಂದೇಶವನ್ನ ತಿಳಿಸುತ್ತೇನೆನ್ನಿ. ಅದೇ ನೀವು ಹೆಣ್ಣಾಗಿದ್ದಲ್ಲಿ, ನಿಮ್ಮನ್ನ ಸಮಾಜದಲ್ಲಿ ಓ ಲಕ್ಷ್ಮೀ, ಓ ಶ್ರೀಲಕ್ಶ್ಮೀ ಅಂತಾ ಹೊಗಳುವ ವರ್ಷವಯ್ಯಾ. ಅದಕ್ಕಾಗಿ ಶನೈಸ್ಚರನನ್ನ ಮಾತ್ರ ಮರೆಯದಿರಿ.

As I already told you, suppose if you are a lawyer and if you are true hard worker and sincere, then Saturn will bring so many clients at your door steps as if now a days people are standing in front of ATMs to withdraw money! Suppose if Karka Rashi or Ascendants are ladies, then every one in the society start calling you Lakshmi, Oh Sree Lakshmi…like that. It means you will become very popular amongst the public. Your hard days are over. Bright days are coming ahead!

ಅದೇ ಶನಿ ಮಹಾರಾಜನ ಮೂರನೇ ದೃಷ್ಟಿಯು ಕುಂಭ ರಾಶಿಯ ಮೇಲೆ ಬೀಳುವುದರಿಂದ, ಅದು ನಿಮ್ಮ ರಾಶಿಗೆ ಅಷ್ಟಮವಾದುದರಿಂದ, ನಾನು ಈ ಮೊದಲೇ ಹೇಳಿದಂತೆ ನಿಮಗೆ ಮೊಂಡಿ ನೋವು, ಬ್ಯಾಕ್ ಪೈನ್, ಕಾಲು ನೋವು ಎಲ್ಲಾ ವಕ್ಕರಿಸಿ ಬಂದು ಆಸ್ಪತ್ರೆಯ ಮೆಟ್ಟಿಲನ್ನ ತುಳಿಯದೇ ಇರಲು ಸಾಧ್ಯವಿಲ್ಲಾ ಅಂತ ನನ್ನ ಅಭಿಪ್ರಾಯ. ಸಿಹಿ ತಿಂದವನಿಗೆ ಸಕ್ಕರೆ ಕಾಹಿಲೆ ಇರಲೇ ಬೇಕು ಅನ್ನುವ ನಿಯಮವೇನೂ ಇಲ್ಲ. ಆದರೆ ಸಕ್ಕರೆ ಕಾಹಿಲೆ ಬಂದ ಮೇಲೆ, ಸಿಹಿಯನ್ನ ತಿನ್ನಬಾರದು ಅಷ್ಟೆ. ಅತೀ ಹೆಚ್ಚು ರಾಜಯೋಗವೂ ಸಕ್ಕರೆ ಕಾಹಿಲೆ ಇದ್ದಂತೆ. ಅದಕ್ಕೇ ಈ ನಮ್ಮ ಸನೈಸ್ಚರನು ಪ್ರತಿಯೊಬ್ಬರ ಜಾತಕದಲ್ಲೂ ಇದ್ದು, ಸಮಯಕ್ಕೆ ಸರಿಯಾಗಿ ಅವರುಗಳಿಗೆ ಬುಧ್ಧಿಯನ್ನ ಕಲಿಸಿ ಅವರನ್ನ ಆಕಾಶದಿಂದ ಭೂಮಿಗೆ ತರುತ್ತಿರುವುದು.


Staurn’s 3rd aspect will be on Kumbha, and it is 8th H from your Rashi. Due to this effect, you may be admitted to hospital for some treatment. You may be facing some hurdles as 8th house is for the hurdles. Of course, Shani will not give anything to you so smoothly also! So if you trust him, Dev or Hanuman he will do good to you in this new year.

ಶನಿಯ ೭ನೇ ದೃಷ್ಟಿಯು ಮಿಥುನ ರಾಶಿಯ ಮೇಲೆ ಬೀಳುವುದರಿಂದ ಅಲ್ಲಿ ಅನಾವಷ್ಯಕ ಖರ್ಚನ್ನ ಮಾಡಲಿಕ್ಕಿದ್ದಾನೆ. ನಿಮ್ಮ ಅತೀ ಉತ್ತಮ ಶಯನ ಸುಖಕ್ಕೆ ಸ್ವಲ್ಪ ಪೆಟ್ಟು ಬಿದ್ದೀತು.  ಅದೇ ಗುರು ಗ್ರಹವು ನಿಮ್ಮ ಶಯನ ಸುಖಕ್ಕೆ ಸೋಪಾನವನ್ನ ಕೊಟ್ಟಲ್ಲಿ, ಶನಿ ಗ್ರಹವು ಅದಕ್ಕೆ ಪೆಟ್ಟನ್ನ ಕೊಟ್ಟಾ ನೋಡಿ. ನಿಮ್ಮ ಮನದನ್ನೆಯ ಮೇಲೆಯೇ ನಿಮಗೆ ಜಿಗುಪ್ಸೆಯೂ ಬಂದೀತು, ಎಚ್ಚರ.

As Saturn’s 7th aspect will be on Gemini, which is your 12th House, there may be expenditure beyond your limit. Same Jupiter gives all comforts, whereas Saturn will give you tension in 12th house. Where there is bitter, there should be sweetness also. Then only you can understand what the sweet is! Your bedly happiness is going out from your hands. You may be spending money for acquiring knowledge also as Mercury, the lord of Gemini is for education, knowledge etc.

ಇನ್ನು ರಾಹು ಗೋಚಾರದ ಕಡೆಗೆ ನಮ್ಮ ಗಮನವನ್ನ ಹರಿಸೋಣವೇ? ರಾಹು ೨೦೧೭ಆಗಷ್ಟ್ ತಿಂಗಳ  ಮಧ್ಯದಲ್ಲಿ ನಿಮ್ಮ ರಾಶಿಯಾದ ಕಟಕಕ್ಕೇ ಪ್ರವೇಷವನ್ನ ಮಾಡಲಿಕ್ಕಿದ್ದಾನೆ. ಅಂದರೆ ವಿಷದ ರಾಜ ರಾಹುವು ಜಲರಾಶಿಯಾದ,ಹಾಗೂ ಅದಕ್ಕೇ ಒಡೆಯನಾದ ಚಂದ್ರನ ರಾಶಿಗೆ ಬಂದಾನೆಂದರೆ, ನೀವೊಬ್ಬರು ಹುಚ್ಚ ಅಂತ ಬಿರುದನ್ನೂ ಪಡೆಯುವಿರಿ. ಜೋಕೆ. ಇದಕ್ಕೆ ಕಾರಣ ಚಂದ್ರನು ಮನೋ ಕಾರಕ. ಕಟಕದಲ್ಲಿಯೇ, ಅಥವಾ ವೃಷ್ಚಿಕದಲ್ಲಿಯೇ ಅಥವಾ ಕುಂಭದಲ್ಲಿಯೇ ಅಥವಾ ಮೇಷದಲ್ಲಿ ಒಂದು ವೇಳೆ ಚಂದ್ರನು ಬಂದಾ ಅಥವಾ ಇದ್ದಾ ಎಂದರೆ, ನೀವು ನಿಮ್ಮ ಹೆಂಡತಿ ಅಥವಾ ಗಂಡನನ್ನ ಸಾಕ್ಷಿಯಾಗಿ ಕೇಳಿ, ಅವರೇ ಹೇಳುತ್ತಾರೆ ನಮ್ಮ ಗಂಡ ಸ್ವಲ್ಪ ತಿಕ್ಕಲ್ ಅಂತ. ಜಾಸ್ತಿ ತಿಕ್ಕಲ್ ಅಂತ ಅವ್ರೆಲ್ಲಿಯಾದರೂ ಹೇಳಿಯಾರೆ?. ಅವರಿಗೆಲ್ಲಿಯಾದರೂ ಅಕ್ಕನಿದ್ದರೆ , ಅಲ್ಲಾ ಅಕ್ಕಾ ಎಲ್ಲರ ಮನೆಯ ದೋಸೆಯೂ ತೂತು, ಈಗ ಭಾವ ಇದ್ದರಲ್ಲಾ , ಅವರೂ ಕೂಡ ತಿಕ್ಕಲ್ ತರಾನೆ ಕೆಲವೊಮ್ಮೆ ಮಾತನಾಡುವುದಿಲ್ಲವೇ? ಹಾಗೆಯೇ ನನ್ನ ಗಂಡಾ ಕೂಡ. ನಮಗೇನೂ ಕಡಿಮೆ ಮಾಡಲಿಲ್ಲಾ ಅನ್ನುವ ಸಾಂತ್ವನವನ್ನ ಹೇಳ್ದೇ ಹೋದರೆ, ಆಮೇಲೆ ನನ್ನ ಹತ್ತಿರ ಬಂದು ಹೇಳಿ, ಹೌದೇ ನೀವು ಜ್ಯೋತಿಷ್ವನ್ನ ಬರೆಯುತ್ತೀರಾ? ಇಲ್ಲ ಅವರವರ ಮನೆಯ ಕಥಎಯನ್ನು ಬರೆಯುತ್ತೀರ್ರಾ ಅಂತ. ರಾಹುವೇ ಹಾಗೆ ಸ್ವಾಮೀ. ಆತ ಚಂದ್ರ ಮತ್ತು ಸೂರ್ಯನನ್ನ ಗ್ರಹಣಸ್ಥನನ್ನಾಗಿ ಮಾಡುತ್ತಾನೆ. ಆವಾಗಲೇ ನಿಮಗೆ ನಿಮ್ಮ ತಯೊಯೊಡನೆ ಅಥವಾ ಹೆಂಡತಿಯೊಡನೆ ಮಹಾ ಯುಧ್ಧವೇ ನಡೆದೀತು, ಒಂದು ವೇಳೆ ಚಂದ್ರ ಬಂದರೆ. ಅದೇ ಸೂರ್ಯ ಬಂದರೆ ನಿಮ್ಮ ತಂದೆ, ಅಥವಾ ಸರ್ಕಾರದೊಡನೆ, ಅಥವಾ ನಿಮ್ಮ ಬೋಸಿನೊಡನೆ ಜಗಳವಾದೀತು ಎಚ್ಚರ. ಆವಾಗ ಬೇಕು ನಿಮಗೆ ರಾಹುವಿನ ಶಾಂತಿ. ನವಗ್ರಹ ಹೋಮವನ್ನ ಮಾಡಿ ರಾಹುವಿಗೆ ಸ್ವಲ್ಪ ಜಾಸ್ತಿ ಮಂತ್ರವನ್ನ ಹೇಳಿ.

Rahu will transit on the midst of August, 2017 to your own rashi making you more kiri kiri person in the world. If you, are already of that type, then gone. God only has to convince you. Your relationships amongst your family members will be tensed due to your Kiri Kiri nature. You may be called as Mad also. Because, Karaka rashi itself is Jala Rashi and the lord of it is Moon. If Rahu comes to that rashi, then we call it as “Grahanasth” situation. Once Moon is eaten away by Rahu, the native’s mind will not run for any needed things. Hence the name “PAAGAL”! In that case if Moon is either in Karaka, Vruschik, Makara or in Mena(Pisces), you will be called as “PAAGAL” only since Rahu’s 5th, 7th and 9th aspect will be falling on all these houses. To defend their husband, their spouse may start telling that Jaisa your husband, my husband now a days acts like “PAAGAL”! But he has done enough to us, so that even for three Janmas, we can eat what he has earned so far! This is the sentence from their mouth! If moon is eaten by Rahu, your relationship with your mother may be hardened. If Sun is eaten by Rahu, then your relationship with father will be strained.

ಒಂದು ವೇಳೆ ಚಂದ್ರನ ದೆಶೆ ಎಲ್ಲಿಯಾದರೂ ನಡೆಯಿತೆನ್ನಿ. ಆ ೧ ೧/೨ ವರ್ಷ, ರಾಹು ನಿಮ್ಮ ರಾಶಿಯಲ್ಲಿರುವವರೆಗೆ ನಿಮ್ಮ ಮಂಡೆ ಹತ್ತ ಹಾಳಾಗುವುದರಲ್ಲಿ ಸಂದೇಹವೇ ಬೇಡ. ಈ ಸಮಯದಲ್ಲಿ ನೀವು ನಾಗನಿಗೆ ತನುವನ್ನ ಹಾಕಿ. ಈಷ್ವರನ ತಲೆಯ ಮೇಲೆ ಹಾಲನ್ನ ಹಾಕಿ. ಒಳ್ಳೆಯದಾಗುತ್ತೆ ನೋಡಿ. ಒಳ್ಳೆಯದೇ ಆಗಲಿ.

Suppose if Moon Dasha for 10 years started, then your Head will be 100% becomes brain less! For this, start pouring milk on every day if possible or on every Monday on Lord Ishwar.  Or you may have to offer Milk to Snake God, as Rahu is nothing but Snake Head!


Written By



P.Surendra Upadhya,
Acupressure Therapist,
Reikie Master,
An Astrologer BY Hobby,

Retd. Principal Of Dena Bank Staff Training College, Karol Bagh, New Delhi.

No comments:

Post a Comment