Saturday, 26 November 2016

ಹೊಸ ವರ್ಷ, ೨೦೧೭ರ ವರ್ಷ ಭವಿಷ್ಯ ತುಲಾ ರಾಶಿ ೨೦೧೭:- LIBRA RASHI-201೭

ಹೊಸ ವರ್ಷ, ೨೦೧೭ರ ವರ್ಷ ಭವಿಷ್ಯ
ತುಲಾ ರಾಶಿ ೨೦೧೭:-
LIBRA RASHI-201೭

ಮೊದಲಿಗೆ ಗುರು ಗೋಚಾರವನ್ನ ನೋಡೋಣ:-

ಗುರು ಗ್ರಹವು ಸಪ್ಟೆಂಬರ್ ೧೨ , ೨೦೧೭ ಬೆಳಿಗ್ಗೆ ೬.೫೧ ಕ್ಕೆ ಕನ್ಯಾ ರಾಶಿಯನ್ನ ಬಿಟ್ಟು, ತುಲಾ ಪ್ರವೇಷವನ್ನ ಮಾಡುತ್ತಾನೆ. ಇದರಿಂದಾಗಿ ನೀವು ಇದುವರೆಗೆ ಧರ್ಮ ಕಾರ್ಯಗಳಿಗೆ, ಊರೂರು ಅಲೆದು, ದೇವಸ್ಥಾನಗಳನ್ನೂ ನಿಮ್ಮ ಪಿಕ್ನಿಕ್ಕಿನ ಜೊತೆಯಲ್ಲಿ ಸೇರಿಸಿ ನೋಡಿದ್ದಕ್ಕೆ ಖರ್ಚು ಮಾಡಿದ್ದೀರಿ. ಈಗ ಅದಕ್ಕೆ ತಿಲಾಂಜಲಿಯನ್ನ ಕೊಟ್ಟು ನಿಮ್ಮ ವ್ಯಕ್ತಿತ್ವದ ಕಡೆಗೆ ಸ್ವಲ್ಪ ಗಮನವನ್ನ ಹರಿಸಲಿಕ್ಕಿದ್ದೀರಿ. ನಿಮ್ಮ ನಡೆ ಮತ್ತು ನುಡಿಗಳಲ್ಲಿ ವ್ಯತ್ಯಾಸವುಂಟಾಗುತ್ತದೆ.

GURU GOCHARA :-

Jupiter will transit from Virg to Libra on September 12th, 2017 at 6.51 AM. But till September 11th, 2017 it is posited in Virgo, which is 12th (Vyaya Sthan) House from Libra. Hence the native’s expenditure will unnecessarily be high during this period. Native’s personal happiness will be jeopardised.

But, the same thing will become possitive, soon after when Jupiter transits to Libr on September 12th, 2017 at 6.51 AM. THen Jupiter being in Lagna, native’s pesonality will be like “CHAR CHAND JAISA HOTA HE”. It means he will be shine during this period. Every body start giing respect to his talk, to his move in the society and for his actions also. The native start eating good food and will be having good thoughts for his brain during this period.




ಗುರುಗ್ರಹದ ಪಂಚಮ ದೃಷ್ಟಿಯು ಕುಂಭ ರಾಶಿಯ ಮೇಳೆ ಬೀಳುವುದರಿಂದ, ಆ ರಾಶಿಯು ನಿಮ್ಮ ತುಲಾ ರಾಶಿಯಿಂದ ೫ ನೇ ಮನೆಯಲ್ಲಿರುವುದರಿಂದ, ನಮ್ಮ ಸೂಕ್ತದ ಪ್ರಾಕಾರ, ಗುರು ಗ್ರಹವು ೨,೫,೭,೯ ಮತ್ತು ೧೧ ನೇ ಮನೆಯಲ್ಲಿ ಗೋಚಾರದಲ್ಲಿರುವಾಗ, ಒಳ್ಳೇಯದನ್ನೇ ಮಾಡುತ್ತಾನೆ. ನಿಮ್ಮ ಮಕ್ಕಳೆಲ್ಲಿಯಾದರೂ ವಿದ್ಯಾಭ್ಯಾಸವನ್ನ ಮಾಡುತ್ತಿದ್ದಲ್ಲಿ, ಅವರುಗಳು ಹೈಯ್ಯರ್ ವಿದ್ಯಾಭ್ಯಾಸವನ್ನ ಮಾಡುವವರಾಗುತ್ತಾರೆ. ಅದೇ ಕೋಂಪಿಟಿಷನ್ ಪರೀಕ್ಷೆಯನ್ನ ಏನಾದರೂ ಬರೆದಿದ್ದಲ್ಲಿ, ಅವರು, ಅದರಲ್ಲಿ ಉತ್ತಿರ್ಣತೆಯನ್ನ ಗಳಿಸುತ್ತಾರೆ. ವಿದ್ಯಯಲ್ಲಿ ಪ್ರಥಮ ರ್ರೇಂಕನ್ನೂ ಗಿಟ್ಟಿಸಿಯಾರು. ಇದು ನಿಮ್ಮ ಪೂರ್ವ ಪುಣ್ಯ ಸ್ಥಾನವಾದ ಕಾರಣ ನಿಮಗೆ ಎಲ್ಲಾ ರೀತಿಯಲ್ಲೂ ಸುಖ, ಸಂಪತ್ತು  ಮತ್ತು ಸೌಕರ್ಯಗಳು ಲಭ್ಯವಾಗುತ್ತದೆ. ನೀವೆಲ್ಲಿಯಾದರೂ ಹೊಸತಾಗಿ ಮದುವೆ ಆದಲ್ಲಿ ಇಲ್ಲಾ ಇನ್ನೂ ಮದುವೆ ಆಗಿ ಮೂರು ರಿಂದ ಐದು ವರ್ಷಗಳಾದ ಪಕ್ಷದಲ್ಲಿ ನಿಮ್ಮ ಲವ್ ಏಂಡ್ ರೋಮೇನ್ಸಿಗೊಂದು ಮಿತಿಯೇ ಇರುವುದಿಲ್ಲ. ಎಲ್ಲಾ ರೀತಿಯಲ್ಲೂ ನೀವು ಈ ಪ್ರೀತಿ ಮತ್ತು ಪ್ರೇಮಗಳಲ್ಲಿ ಪ್ರಯೋಗಗಳನ್ನ ಮಾಡಿ ಅದರ ಆನಂದವನ್ನ ಸವಿಯುತ್ತೀರ. ನಿಮ್ಮ ಐನ್ ಸಂಬಂಧಿಕರಲ್ಲಿ ಹೆಸರನ್ನ ಗಳಿಸುವಿರಿ. ನಿಮ್ಮ ಸಂಬಂಧಗಳು ಅವರೊಂದಿಗೆ ಒಳ್ಳೆಯ ರೀತಿಯಲ್ಲಿ ಸಾಗುವುದು.

Jupiter, while in Libra aspect Kumbha Rashi through his 5th aspect. As per our dictum, Jupiter will do well in 2,5,7,9 and 11 houses when in Gochara. But this dictum will be applicable only for the planet stationed in the birth chart. Suppose if yours in Gemini Ascendant or Lagna say, if then Jupiter is posited in Libra, it will be 5th H and hence Jupiter will do Good. So, also in Gochara. When Jupiter in 2,5,7,9 and 11th House from the rashi, he will do good. Here Jupiter is in rashi only. It means it will be 1st H. So our dictum will not be applicable. Again it will not applicable for 5,7,9 aspects. However Jupiter does good in these houses. Normally as per our rule, Jupiter does bad for the house where he is posited and does well where he aspects. Hence 5th house is for Children, Purva Punya, Higher education or for post graduation etc. All these will be in full swing. Children if they sit for the competitive examination, they will do well and sure to pass the examination. The native will be loved by their children.

ಇನ್ನು ಗುರುವಿನ ೭ ನೇ ದೃಷ್ಟಿಯು ಮೇಷ ರಾಶಿಯ ಮೇಲೆ ಬೀಳುವುದರಿಂದ, ನಿಮಗೂ ನಿಮ್ಮ ಸ್ಪೌಸಿಗೂ ಉತ್ತಮ ಬ್ರಿಡ್ಜ್ ಉಂಟಾಗುತ್ತದೆ. ನೀವು ಹೇಳಿದಂತೆ ಕುಣಿಯಲು ಶುರು ಮಾಡುತ್ಟಾರೆ. ಅವರೊಂದಿಗೆ ನಿಮ್ಮ ಒಲವು ಬಹಳ ಅಗಾಧವಾಗಿರುತ್ತದೆ. ನಿಮ್ಮ ಪಾರ್ಟ್ನರ್ಶಿಪ್ ಬಲವಾಗಿರುತ್ತದೆ. ನೀವೆಲ್ಲಿಯಾದರೂ ಬಿಸಿನೆಸ್ಸ್ ಮಾಡುತ್ತಿದ್ದಲ್ಲಿ, ಅದು ಸರಾಗವಾಗಿ ಸಾಗುತ್ತದೆ. ನೀವೇ ಪ್ರಪಂಚ, ಪ್ರಪಂಚವೇ ನೀವೆನ್ನುವ ರೀತಿಯಲ್ಲಿ ನಿಮ್ಮ ಜೀವನ ಸಾಗುತ್ತದೆ.
Jupiter’s 7th aspect will be on Aries. As such, there will be good relationship between the native and spouse. Their love and romance will be in full swing. If they are doing any business, it will be flourished. Your partnership will be very strong.

ಅದೇ ಗುರುವಿನ ನವಮ ದೃಷ್ಟಿಯು, ಮಿಥುನ ರಾಶಿಯ ಮೇಲೆ ಬೀಳುವುದರಿಂದ, ಅದು ನಿಮ್ಮ ರಾಶಿಯಿಂದ ೯ನೇ ಮನೆಯಾದುದರಿಂದ ಹಾಗೂ ಅದು ನಿಮ್ಮ ಭಾಗ್ಯದ ರಾಶಿಯಾದ ಕಾರಣ, ನಿಮ್ಮ ಭಾಗ್ಯಕ್ಕೇನೂ ಕುಂದಿಲ್ಲಾ ಎನ್ನಿ. ನೀವು ಇನ್ನಸ್ಟು ಪ್ರಪಂಚವನ್ನ ಹನುಮಂತನ ತರಹ ಸುತ್ತುವಿರಾ. ಇದು ನಿಮ್ಮ ಜೀವನದ ಅತ್ಯಂತ ಪರಮ ಸುಖದ ಕಾಲವೆಂದು ತಿಳಿಯಿರಿ. ನಿಮ್ಮ ತಂದೆಯೊಂದಿಗೆ ಉತ್ತಮ ಸಂಬಂಧವೇರ್ಪಡುವುದು. ನಿಮ್ಮ ತಂದೆಯಿಂದ ಭಾಗ್ಯವೂ ಬರಲಿಕ್ಕಿದೆ. ಹೆಚ್ಚಿನಂಷ ನಿಮಗೆ ಅವರಿಂದ ಜಮೀನು, ಮನೆ, ಹಣ ದಕ್ಕೀತು. ನಿಮ್ಮ ಲಗ್ನವು ತುಲಾ ಇದ್ದಲ್ಲಿ, ಒಂದು ವೇಳೆ ನೀವು ಈವಾಗಲೇ ವಿದೇಶದಲ್ಲಿ ನೆಲಸಿದ್ದ ಪಕ್ಷದಲ್ಲಿ, ನಿಮ್ಮ ಯಾವುದೇ ಪೆಂಡಿಂಗ್ ಪೇಪರುಗಳು ಕ್ಲಿಯರ್ ಆಗುವುದರಲ್ಲಿ ಸಂದೇಹವೇ ಬೇಡ. ಒಂದು ವೇಳೇ ನಿಮ್ಮದು ರಾಶಿಯೇ ತುಲಾವಾಗಿದ್ದು, ಅಲ್ಲಿ ಬೇರೆ ಇನ್ನೊಬ್ಬ ಗುರುವಿಗೆ ಸಮಾನಾದ ಶುಕ್ರನು ಕುಳಿತಿದ್ದರೆ, ನಿಮ್ಮಲ್ಲಿ ವಾದಕ್ಕೆ ಕೊನೆಯೇ ಇಲ್ಲದಂತಾಗುತ್ತದೆ. ಒಂದು ವೇಳೆ  ನಿಮ್ಮ ಲಗ್ನವೆಲ್ಲಿಯಾದರೂ ಮೇಷವಾಗಿ, ರಾಶಿಯು ತುಲವಾಗಿದ್ದಲ್ಲಿ, ನಿಮ್ಮ ಗಂಡನ ವಿತಂಡವಾದ ಇನ್ನಸ್ಟು ಹೆಚ್ಚುತ್ತದೆ. ಆದರೂ ಕೂಡ, ಆತನು ನಿಮ್ಮ ಹೆಜ್ಜೆಯ ಮೇಲೆ ಆತನು ಹೆಜ್ಜೆಯನ್ನೂ ಹಾಕಿಯಾನು ಎನ್ನಿ.
Jupiter’s 9th aspect will be on Gemini which is 9th House from your Libra rashi. Hence you will be blessed with good bhagya. You are also getting full support from your father as the relationship is good during this period of Jupiter’s stay for one year. You may expect property, House , Finance from your Father also. Suppose if you are staying in abroad, if any papers are pending, it will be cleared during this period. 

ಈಗ ನಾವು ಇನ್ನೊಂದು ಗ್ರಹವಾದ ಶನಿಯ ಗೋಚಾರದತ್ತ ಗಮನವನ್ನ ಹರಿಸೋಣ:-

ಶನಿಯು ಇದೇ ಜನುವರಿ  ೨೬, ೨೦೧೭ ರಂದು ವೃಶ್ಚಿಕ ರಾಶಿಯಿಂದ ಧನೂರ್ ರಾಶಿಗೆ ತನ್ನ ಕಾಲನ್ನ ಇಡುವನು. ಅದರಿಂದಾಗಿ ನಿಮಗೆ ಸಣ್ಣ ಪುಟ್ಟ ಸಂಚಾರರಗಳಿಗೆ ನಾಂದಿ ಹಾಕಿದಂತಾಯಿತು. ಶನಿಯ ಮೂರನೇ ವಕ್ರ ದೃಷ್ತಿಯು ಕುಂಭ ರಾಶಿಯ ಮೇಲೆ ಬೀಳುವುದರಿಂದ, ಇದುವರೆಗೆ ಗುರು ನಿಮಗೆ ಏನನ್ನೆಲ್ಲಾ ಕೊಟ್ಟಾ ಅಂತ  ಹೇಳಿದನಲ್ಲಾ, ಅದನ್ನ ನಿಮಗೆ ಸ್ವಲ್ಪ ನಿಧಾನವಾಗಿ ಕೊಡಲು ಶುರು ಮಾಡುತ್ತಾನೆ. ನೀವೆಲ್ಲಿಯಾದರೂ ಮಕ್ಕಳನ್ನ ಮಾಡಲು ಪ್ಲೇನ್ ಅಥವಾ ಸ್ಕೆಚ್ ಹಾಕಿದಲ್ಲಿ, ಶನಿ ಮಹಾರಾಜನು ಅದನ್ನ ಮುಂದಕ್ಕೆ ಹಾಕುತ್ತಾನಷ್ಟೆ. ಆದರೆ ಆತ ನಿಮ್ಮ ಸ್ಕೆಚ್ಚನ್ನ ಹಾಳನ್ನೇನೂ ಮಾಡಲಾರ. ಆತ ತಡವನ್ನು ಮಾಡಿಯಾನೇ ವಿನಹ, ನಿಮಗೆ ಕೊಡುವುದೇ ಇಲ್ಲಾ ಅಂತ ಹೇಳುವುದಿಲ್ಲ. ಅದಕ್ಕೆ ನೀವು ಶನೈಸ್ಚರನನ್ನ ನಂಬಬೇಕಷ್ಟೆ. ಹನುಮಾನ್ ಚಾಲೀಸವನ್ನ ಓದಲು ಶುರು ಮಾಡಿ.





SATURN’s GOCHARA:-

Saturn’s gochara will be to Sagittarius Rashi on January 26th, 2017. It will be 3rd House from Libra and hence the native may be doing frequent short type of travels. Saturn’s 3rd aspect will be on Kumbha rashi and is 5th House from Libra. Hence if the native’s children are in higher education, they may find tough to pass the examination. They become lazy in reading also as Saturn is for lazy behavior. If you are planning for children, Saturn will postpone the same. There may be differences of opinion between you and your children.

ಅದೇ ಶನಿಯ ನೇರ ದೃಷ್ಟಿಯು ಮಿಥುನ ರಾಶಿಯ ಮೇಲೆ ಬೀಳುವುದರಿಂದ, ನಿಮ್ಮ ಭಾಗ್ಯವೂ ನಿಧಾನವಾದೀತು. ಗುರುವಿನ  ದೃಷ್ಟಿ ಇರುವವರೆಗೆ ತೊಂದರೆ ಇಲ್ಲ. ಒಂದೊಂಮ್ಮೆ ಗುರು ಗ್ರಹವು ತನ್ನ ಗೋಚಾರದಲ್ಲಿ ಮುಂದಿನ ರಾಶಿಗೆ ಹೋದಾವಾಗ, ನಿಮಗೆ ಶನೈಸ್ಚರನ ಕಾಟಾಚಾರಗಳು ಅನುಭವವಾದೀತು.

Saturn’s direct , 7th aspect will be on your spouse house Aries. Hence there may be disputes between you your spouse. If there is business partnership, it may be broken. BUt so long as Jupiter’s aspect is there, there may not be problems. However, once Jupiter moves to Scorpio, then problems will start between you and your spouse. So go to Shani Mandir and start chanting Shani Mantras.

ಇನ್ನು ಶನೈಶ್ಚರನ ೧೦ ನೇ ದೃಷ್ಟಿಯು ಕನ್ಯಾ ರಾಶಿಯ ಮೇಲೆ ಬೀಳುವುದರಿಂದ, ಆ ರಾಶಿಯು ನಿಮಗೆ ವ್ಯಯ ಸ್ಥಾನವಾದ ಕಾರಣ, ನಿಮ್ಮ ಖರ್ಚು ವೆಚ್ಚಗಳು ಮುಂದಿನ ೨ ೧/೨ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗಲಿಕ್ಕೆ ಸಾಧ್ಯ. ಒಂದು ವೇಳೆ ಕನ್ಯಾ ರಾಶಿಯು ನಿಮ್ಮ ಲಗ್ನದಿಂದ ೬ನೇ ಮನೆಯಾದಲ್ಲಿ, ಅದು ಕಾಲ ಪುರುಷನ ೬ನೇ ಮನೆಯಾಗಿದ್ದು, ಆ ರಾಶಿಯು ರೋಗ, ಋಣ ಹಾಗೂ ರಿಪು (ಶತ್ರುಗಳನ್ನ ಸೂಚಿಸುತ್ತದೆ. ಅವುಗಳು ಇನ್ನಷ್ಟು ಉಲ್ಭಣಗೊಳಿಸುವುದು. ಅಂದರೆ ನಿಮಗೆ ಅನಗತ್ಯ ಆಸ್ಪತ್ರೆಯ ಮೆಟ್ಟಿಲನ್ನ ಏರುವ ಸಂದರ್ಬಗಳು ಬಂದೀತು. ಆ ರೀತಿಯಾದರೂ ನಿಮ್ಮ ಖರ್ಚುಗಳು ಜಾಸ್ತಿಯಾಗಲು ಸಾಧ್ಯ ಉಂಟು. ಮತ್ತೆ ನಿಮಗೆ ಶತ್ರುಗಳು ಹುಟ್ಟುವವು. ನೀವು ಅನಗತ್ಯ ಸಾಲವನ್ನ ಮಾಡಲಿಕ್ಕಿರುವಿರಿ. ಆದರೆ ಭಯ ಬೀಳುವಂತಹದ್ದೇನೂ ಇಲ್ಲ. ಶನಿವಾರ, ಶನಿವಾರದಂದು ಹನುಮಾನ್ ಚಾಲೀಸ್ ಓದಿ. ಶನಿ ಮಂದಿರಕ್ಕೆ ಶನಿವಾರ ಭೇಟಿಕೊಟ್ಟು, ಕರಿ ಬಟ್ಟೆ, ಕರಿ ಎಳ್ಳೂ ಹಾಕಿ, ಎಳ್ಳೆಣ್ಣೆ ದೀಪವನ್ನ ಹಚ್ಚಿ ಬನ್ನಿ.

Saturn’s 10 th aspect will be on Virgo and since it is VYaya Sthan, your unnecessary expenditure will go up. Since this is 6th house for Kalapurush, you may be facing knee pain, leg pains, Hip joint pains etc. during this period of 2 1/12 years. You may be admitted to hospital for the sake of treatment. Your debts may be up. But start chanting Hanuman Chalis on every Saturday.

ಇನ್ನು ರಾಹು ಗೋಚಾರವನ್ನ ನೋಡೋಣ:-
RAHU GOCHARA:-


ರಾಹು ಗ್ರಹವು ಆಗಸ್ಟ್ ತಿಂಗಳ ಮಧ್ಯದಲ್ಲಿ ಕಟಕ ರಾಶಿಗೆ ಹೋಗುವುದರಿಂದ, ಆ ರಾಶಿಯು ನಿಮಗೆ ೧೦ ನೇ ಮನೆ ಆದ ಕಾರಣ, ನಿಮ್ಮ ವೃತ್ತಿಯಲ್ಲಿ ಸಡನ್ ಆಗಿ ಜಂಪಾಗಬಹುದು. ಸ್ವಲ್ಪ ಕಿರಿ ಕಿರಿಯೂ ಆಗಲು ಸಾಧ್ಯವೆನ್ನಿ.

Rahu in the midst of August, 2017,will transit to Cancer which is your professional House. Hence you may expect sudden surprises in your profession. You may go abroad also for the sake of some technical upgradation.

ಅದೇ ರಾಹುವಿನ ಪಂಚಮ ದೃಷ್ಟಿಯು ವೃಶ್ಚಿಕ ರಾಶಿಯ ಮೇಳೆ ಬೀಳುವ ಕಾರಣ, ನಿಮ್ಮ ಧನ ಹಾಗೂ ಕುಟುಂಬದಲ್ಲಿ ಕಿರಿ ಕಿರಿ ಆಗಲು ಸಾಧ್ಯ. ರಾಹುವಿನ ನೇರ ದೃಷ್ಟಿಯು ಮಕರ ರಾಶಿಯ ಮೇಲೆ ಬೀಳುವುದರಿಂದ, ನಿಮ್ಮ ಸುಖಕ್ಕೆ ಅಡ್ಡಿಯಾದೀತು. ತಾಯಿಯೊಡನೆ ಜಗಳವಾದೀತು. ನೀವೆಲ್ಲಿಯಾದರೂ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಲ್ಲಿ ಅದರಲ್ಲಿ ತೊಡಕುಂಟಾದೀತು.

Rahu’s 5th aspect will be on Scorpio, which is your 2nd H, which is your Kutumbha Sthan and Fanance and Family house also. So , unnecessary disputes and tussels may erupt in your family members. As Rahu’s 7th aspect will be on Capricorn which is 4th House from your rashi, your happiness may be at stake! There may be differences of opinion between you and your mother. If you are studying in high scholl, it may be disturbed.

ಅದೇ ರಾಹುವಿನ ೯ ನೇ ದೃಷ್ಟಿಯು ಮೀನ ರಾಶಿಯ ಮೇಲೆ ಬೀಳುವುದರಿಂದ, ನಿಮ್ಮ ಆರೋಗ್ಯಕ್ಕೆ ಯಾವ ತೊಂದರೆಯೂ ಇಲ್ಲವಾಗುತ್ತೆ. ನಿಮ್ಮ ಮುಂದೆ ಯಾವ ಶತ್ರುಗಳೂ ನಿಲ್ಲಲು ಸಾಧ್ಯವಿಲ್ಲವಾಗುತ್ತೆ. ಆದರೆ ಅದೇ ಮೀನ ರಾಶಿಯ ಮೇಲೆ ಮಂಗಲನು ಎಲ್ಲಿಯಾದರೂ ಇದ್ದಲ್ಲಿ, ಅಲ್ಲಿ ಭೂಕಂಪವೇ ಆದೀತು. ನೀವು ಪೋಲೀಸು ಮೆಟ್ಟಿಲು, ಕೋರ್ಟು ಕಚೇರಿಗಳನ್ನ ತುಳಿಯಲಿಕ್ಕಿರುವಿರಿ. ನಿಮ್ಮ ಗ್ರಹಗತಿಗಳು ಸರಿ ಇಲ್ಲದಿದ್ದರೆ, ಜೈಲನ್ನೂ ಸೇರಿಬಿಟ್ಟಿರಿ. ರಾಹು ಶಾಂತಿಯನ್ನ ಮಾಡಿ. ಎಲ್ಲಾ ಸರಿ ಹೋಗುತ್ತೆ. ರಾಹು  ಮತ್ತು ಕುಜನೆಂದರೆ ಒಂದು ರೀತಿಯ ವಿಸ್ಪೋಟವೇ ಸರಿ. ಆದ್ರೆ ಶತ್ರುಗಳ ಧ್ವಂಸ Aಗುವುದರಲ್ಲಿ ಸಂದೇಹವೇ ಬೇಡ.
Rahu’s 9th aspect will be on Pisces which is 6th house. Rahu here may good. Since 6th House is for Runa,ROGA and RIPU, all these front will have advantages for the native.


Written By


P.Surendra Upadhya,
Acupressure Therapist,
Reikie Master,
An Astrologer BY Hobby,
Retd. Principal Of Dena Bank Staff Training College, Karol Bagh, New Delhi.







No comments:

Post a Comment